ಪಿತನಲ್ಲಿ ಬೇರೂರಿದವರು
ಯಾತ್ರಾಗೀತೆ.
ಭರವಸೆಯನ್ನು ಭೂಗೋಳದ ಭಾಷೆಯಲ್ಲಿ ವರ್ಣಿಸಲಾಗಿದೆ. ಭರವಸೆಯಿಡುವವರು ಚೀಯೋನ್ ಪರ್ವತದಂತೆ ಕದಲದವರು; ಬೆಟ್ಟಗಳು ಯೆರೂಸಲೇಮನ್ನು ಸುತ್ತುವರಿದಿರುವಂತೆ ನಮ್ಮ ತಂದೆ ಅವರನ್ನು ಸುತ್ತುವರಿದಿದ್ದಾರೆ. ದುಷ್ಟರ ಆಳ್ವಿಕೆ ಈ ದೇಶದ ಮೇಲೆ ಉಳಿಯುವುದಿಲ್ಲ, ಏಕೆಂದರೆ ಅದು ಒಳ್ಳೆಯವರನ್ನು ತಪ್ಪು ಮಾಡುವಂತೆ ಪ್ರೇರೇಪಿಸುತ್ತದೆ.
125 1ನಮ್ಮ ತಂದೆಯಲ್ಲಿ ಭರವಸೆ ಇಡುವವರು ಚೀಯೋನ್ ಪರ್ವತದಂತೆ ಇದ್ದಾರೆ; ಅದು ಕದಲುವುದಿಲ್ಲ, ಸದಾಕಾಲವೂ ನೆಲೆಯಾಗಿ ನಿಲ್ಲುತ್ತದೆ. 2ಪರ್ವತಗಳು ಯೆರೂಸಲೇಮನ್ನು ಸುತ್ತುವರಿದಿರುವಂತೆ, ನಮ್ಮ ತಂದೆ ಈಗಲೂ ಸದಾಕಾಲವೂ ತಮ್ಮ ಜನರನ್ನು ಸುತ್ತುವರಿದಿದ್ದಾರೆ. 3ನೀತಿವಂತರು ಅನ್ಯಾಯಮಾಡಲು ತಮ್ಮ ಕೈಗಳನ್ನು ಚಾಚದಂತೆ, ದುಷ್ಟತನದ ರಾಜದಂಡ ನೀತಿವಂತರಿಗೆ ಹಂಚಿಕೊಟ್ಟ ದೇಶದ ಮೇಲೆ ನೆಲೆಗೊಳ್ಳುವುದಿಲ್ಲ. 4ನಮ್ಮ ತಂದೆಯೇ, ಒಳ್ಳೆಯವರಿಗೆ, ಹೃದಯದಲ್ಲಿ ಯಥಾರ್ಥರಾಗಿರುವವರಿಗೆ ಒಳ್ಳೆಯದನ್ನು ಮಾಡಿ. 5ಆದರೆ ತಮ್ಮ ಡೊಂಕುಮಾರ್ಗಗಳಿಗೆ ತಿರುಗಿಕೊಳ್ಳುವವರನ್ನು ನಮ್ಮ ತಂದೆ ದುಷ್ಟಕರ್ಮಿಗಳ ಸಂಗಡ ಕರೆದೊಯ್ಯುವರು. ಇಸ್ರಾಯೇಲಿನ ಮೇಲೆ ಸಮಾಧಾನವಿರಲಿ!